ಹಣೆಬರಹ ಹಣದಬರಹ

ಭಾವನೆಯಾಗಿ ಪ್ರಾರಂಭಿಸಿತು 
ಚಿಂತನೆಯಾಗಿ ಬದಲಾಗಿತು 
ಚಿಂತನೆಯಿಂದ ಕನಸೊಂದು ಜನಿಸಲು
ಕನಸು  ಸ್ತಬ್ಧ ಪದವಾಯಿತು
ಪದ ಕೂಗಾಯಿತು 
ಕೂಗು ನನಸಾಗಲು 
ಮನದೊಡನೆ ಕದನವ ಶುರುಮಾಡಿತು
ಗೆದ್ದೊಡನೆ ಮನದೊಡನೆ 
ಶುರುವಾಯಿತು ಕದನ ಜಗದೊಡನೆ 
ಪಟ್ಟು , ನಿಷ್ಠೆ , ಶ್ರದ್ಧೆ ಸೈನಿಕರಾದರು 
ಇನ್ನೇನು ಮೆಚ್ಚಲು ಹರಿ-ಹರರು 
ಅಷ್ಟರಲ್ಲಿಯೇ ಬದಲಾಯಿತು 
ಹಣೆಬರಹ ಹಣದಬರಹವಾಯಿತು
ಮತ್ತೊಮ್ಮೆ ಸೋತ ಮಾನವ
ಹಣಕ್ಕೆ ಬೆಲೆಕೊಟ್ಟಿ ಆದ ದಾನವ 

-
ಕೆ. ಸಿ.

No comments: