ಸಿದ್ದು... ಸಿದ್ದರಾಮಯ್ಯ
ಮಠ ಸುತುತ್ತ ಇರುವ ಸಿ. ಎಂ
ಹೀಗೇ ಆದ್ರೆ ರಾಷ್ಟ್ರ ಕೆಡೋದು ಖಾಯಂ
ಜನರ ಸುತ್ತಾ ಸುತ್ತ ಬೇಕೋ ಸಿದ್ದು
ಏನು ಪ್ರಯೋಜನ ನೀನು ಗೆದ್ದು
ದೇವರನ್ನು ಬೇಡಿದ್ದು ಸಾಕು
ಜನರ ಸಮಸ್ಯೆಗಳಿಗೆ ಉತ್ತರವ ಹುಡುಕು
ಹಣ ದೇವರನ್ನು ಮರೆತು ಬಿಡು
ಋಣದೇವರನ್ನು(ಜನರು) ನೆನಪಲಿಡು
28 ಮಂದಿ ಸಚಿವರಾಗಿ ಪ್ರಮಾಣ
ಸ್ವಚ್ಛವಾಗಿರಲಿ ಇವರ ದೃಷ್ಟಿಕೋನ
ದಿನಸಿ ಸಾಮಾನು ಜನರಿಗೆ ಎಟುಕಿಸಿ
ಬಡವನಿಗೆ ರೈತನಿಗೆ ಜ್ಯೋತಿಯಾಗಲು ಶ್ರಮಿಸಿ
ಪರಿಶುದ್ಧ ರಾಜಕೀಯದಿಂದ ಪಾಲಿಸಿ....
-
ಕೆ. ಸಿ.
ಹಣೆಬರಹ ಹಣದಬರಹ
ಭಾವನೆಯಾಗಿ ಪ್ರಾರಂಭಿಸಿತು
ಚಿಂತನೆಯಾಗಿ ಬದಲಾಗಿತು
ಚಿಂತನೆಯಿಂದ ಕನಸೊಂದು ಜನಿಸಲು
ಕನಸು ಸ್ತಬ್ಧ ಪದವಾಯಿತು
ಪದ ಕೂಗಾಯಿತು
ಕೂಗು ನನಸಾಗಲು
ಮನದೊಡನೆ ಕದನವ ಶುರುಮಾಡಿತು
ಗೆದ್ದೊಡನೆ ಮನದೊಡನೆ
ಶುರುವಾಯಿತು ಕದನ ಜಗದೊಡನೆ
ಪಟ್ಟು , ನಿಷ್ಠೆ , ಶ್ರದ್ಧೆ ಸೈನಿಕರಾದರು
ಇನ್ನೇನು ಮೆಚ್ಚಲು ಹರಿ-ಹರರು
ಅಷ್ಟರಲ್ಲಿಯೇ ಬದಲಾಯಿತು
ಹಣೆಬರಹ ಹಣದಬರಹವಾಯಿತು
ಮತ್ತೊಮ್ಮೆ ಸೋತ ಮಾನವ
ಹಣಕ್ಕೆ ಬೆಲೆಕೊಟ್ಟಿ ಆದ ದಾನವ
-
ಕೆ. ಸಿ.
Subscribe to:
Posts (Atom)