ಹೆಣ್ಮಕ್ಕಳ  ಡೈಲಾಗ್ ಅಲ್ಲಿ ವೆಯಿಟ್ ಇಲ್ಲ 
ಅಧ್ರು ಗಂಡ್ಮಕ್ಕಳ  ಬಿಳ್ತಾರೆ ..... ಡೌಟ್ ಇಲ್ಲ 
-
ಕೆ. ಸಿ.




ಆಚಾರ

ಆಚಾರದ ಬಗ್ಗೆ ವಿಚಾರ ಮಾಡುವಂತಿಲ್ಲ
ಕಣ್ಮುಚ್ಚಿ ಆಚರಿಸುವಂತ ಬುದ್ಧಿ ದೇವರು ಕೊಟ್ಟಿಲ್ಲ
ಎಷ್ಟು ವಿಚಾರಿಸಿದರೂ ಆಚಾರ ಬದಲಾಗುವುದಿಲ್ಲ
ಆಚಾರವ ಬದಲಾಯಿಸುವ ವಿಚಾರ ಮಾಡುವಂತಿಲ್ಲ

ವಿಚಾರವಿಲ್ಲದೆ ಏನು ಮಾಡಿದರೂ ಬೈಯುತ್ತರೆಲ್ಲ
ಆಚಾರದ ಬಗ್ಗೆ ವಿಚಾರ ಮಾಡಿದರೆ ತಡೆಯುತ್ತಾರೆಲ್ಲ
ಸರಿ-ತಪ್ಪುಗಳ ತಿಳಿಯ ಬೇಕೆಂದು ಹೇಳುತ್ತಾರೆಲ್ಲ 
ಆಚಾರವು ಎಷ್ಟು ಸರಿ ಎಂದು ತಿಳಿಯಲು ಹೋದರೆ,  ವಿರೋಧಿಸುತ್ತಾರೆಲ್ಲ 

ದೇವರು ಕೊಟ್ಟ ವಿವೇಕದಿಂದ ವಿಚಾರಿಸುವಂತಿಲ್ಲ
ವಿಚಾರಕೆ ಉಪಯೋಗಬಾರದ ವಿವೇಕವೂ ಪ್ರಯೋಜನವಿಲ್ಲ
ವಿವೇಕವ ಬಿಟ್ಟು ಆಚರಿಸಿದರೆ ಮನಸಿಗೆ ಒಪ್ಪಿಗೆ ಇಲ್ಲ
ಮನಸಿಲ್ಲದೇ ಆಚರಿಸಿದರೆ ಆಚಾರಕೆ ಬೆಲೆಯೇ ಇಲ್ಲ

--
ಕೆ. ಸಿ.

ಕಾಲೇಜ್ನಲ್ಲಿ ಶೇವ್ ಮಾಡ್ತಾ ಇದ್ದೆ ....ಗಡ್ಡ ಮೀಸೆ ಬರಲಿ ಅಂತ
ಈಗೂ  ಶೇವ್ ಮಾಡ್ತಿದಿನಿ ....ಯಾರು ಅಂಕಲ್ ಅಂತ ಕರಿದೆ ಇರ್ಲಿ ಅಂತ 
ಸಮಯ ಬದಲಾಯ್ತು ....ಕಾರಣ  ಬದಲಾಯ್ತು 
ಮಾಡೋ ಕೆಲಸ ಬದಲಾಗಲಿಲ್ಲ ..... ಹಣೆ ಬರಹ
-
ಕೆ. ಸಿ

ಹಸು ದೇವರು! ತಿನ್ನಬಾರದು ...
ಅನ್ನ ದೇವರು! ತಿನ್ನಬಹುದು ....
ತೊಗೊಳಪ್ಪ


-
ಕೆ. ಸಿ


ಅಗಲಿ

ಕಣ್ಮುಚ್ಚಿ ತೆರೆಯುವುದರಲ್ಲಿ ಕಣ್ಮುಚ್ಚಿಸಿದವರ್ಯಾರು
ಜೀವಾತ್ಮವನ್ನು ಪರಮಾತ್ಮ ಕಡೆಗೆ ಸೆಳದವರ್ಯಾರು
ಜೀವ ಜೀವ ಮಧ್ಯ ಸಂಭಂದವ ಮುರಿದವರ್ಯಾರು
ಕಣ್ಣಲ್ಲಿ ಗಂಗೆಯ ಇಟ್ಟವರ್ಯಾರು
ಆ ಗಂಗೆಯ ಉಕ್ಕಿಸಿದ ಶಿವನ್ಯಾರು
ದೇವರಾ? ದೇವರಾ? ಆ ದೇವರ್ಯಾರು

 
-
ಕೆ. ಸಿ

ದೇಶ ಗಣೇಶ ಗಾಂಧಿ


ವರ್ಷವರ್ಷಕ್ಕೂ ಚಿಕ್ಕದಾಯಿತು ವಿನಾಯಕನ ವಿಗ್ರಹ
ಮಣ್ಣಲ್ಲಿ ಮಾಡಿದರೂ ಸ್ವರ್ಣದ ಬೆಲೆ ಅವನ ಅನುಗ್ರಹ 
ವರ್ಷವರ್ಷಕ್ಕೂ ಕಮ್ಮಿಯಾಯಿತು ತರುವ ಪೂಜಾ ಸಾಮಗ್ರಿ   
ಇನ್ಫ್ಲೇಶನ್ ಹೆಸರಲಿ ಏನು ಮಾಡುತ್ತಿರುವಳು ಸೋನಿಯಾ ಗಾಂಧಿ

ಚಿಕ್ಕಚಿಕ್ಕದಾಗುತ್ತ ಮುಂದೆ ಮಾಯವಾಗುವ ಗಣೇಶ(ನಂಬಿಕೆ)
ಯಾವ ಕಡೆಗೆ ಹೋಗುತ್ತಿದೆ ಈ ನಮ್ಮ ದೇಶ 
ಉಪವಾಸ ಮಾಡಿ ಸ್ವತಂತ್ರ ಕೊಟ್ಟ ಆ ಗಾಂಧಿ
ಜನರ ರಕ್ತ ಹೀರುತ್ತಿರುವಳು ಈ ಗಾಂಧಿ 


ದೇವರ ಪೂಜಿಸಲು ಹಿಂದೆ ಮುಂದೆ  ನೋಡುವ ಸ್ಥಿತಿ
ಇದು ಎಂಥ ದುರ್ಗತಿ ಗಣಪತಿ 
ಸಿದ್ದಿಸಿ ಬೇಡುವೆ ಸಿದ್ದಿ ವಿನಾಯಕ 
ಕೊಡು ನಮ್ಮ ದೇಶಕ್ಕೆ ಒಳ್ಳೆ ನಾಯಕ 


-

ಕೆ. ಸಿ.
                     ದಿನ + ಓಟ = ?

ಒಂದು ಗಂಟೆಗೆ ಕ್ಯಾಬ್  ಚಾಲಕನ ಫೋನ್ ಕಾಲು
"ಊಟ ಬೇಗ ಮಾಡು" ಅಂತ  ಅಮ್ಮ  ಹೇಳಲು
ಕರಿಯುತ್ತಿರಲು ಮಿಸ್ಡ್ ಕಾಲ್  ಮೇಲ ಮಿಸ್ಡ್ ಕಾಲು
ಅಮ್ಮ  ಕೊಟ್ಟಳು ಕುಡಿಯಲು ಹಾಲು 


ಕೂತೆನು ಕ್ಯಾಬಲ್ಲಿ  ಸಾರೀ ಹೇಳುತ
ಒಳೆಗೆ  ಬೈಕೊಂಡು ಮೇಲ ಕಿಸಿಯುತ
ಹಿಂತುರುಗಿ ನೋಡಿದೆ, "ಹಾಯ್" ಹೇಳಲು ಗೆಳಯ 
ಅವನಿಗೆ ಫೋನಿನಲ್ಲಿ ಗರ್ಲ್ ಫ್ರೆಂಡಿನ ಪ್ರಳಯ


ಅಷ್ಟರಲ್ಲಿಯೇ ಹೊಡ್ಕೊಂತು ನನ್ನ ಫೋನು
ನೋಡಿ ಅದನ್ನು ಭಯಭೀತನಾದೆನು ನಾನು
"ಹಲೋ" ಹೇಳಿದಂತೆಯೇ, ಶುರುವಾಯಿತು ಸುಂಟರಗಾಳಿ
ಮಾತಿನಲ್ಲಿಯೇ ಗರ್ಲ್ ಫ್ರೆಂಡಿನ ದಾಳಿ


ಕ್ಯಾಬ್ ಚಾಲಕ ಬ್ರೇಕ್ ಹೊಡೆದರು
ಆಚೆ ನೋಡಿದರೆ, ಕಂಪನಿಯ ಎದುರು!
ಅಷ್ಟು ಬೇಗನೆ  ಬಂದು ಬಿಟ್ಟೇನ
ಇಲ್ಲ ಪ್ರೇಯಸಿ ಕಾಲ ನುಂಗಿಬಿಟ್ಟಳ?


ಹೇಳಿದೆ ನಾನು ಪ್ರೇಯಸಿಗೆ ಬೈ
ಒಳೆಗೆ ಹೊರೆಟೇನು ಹೇಳುತ್ತ  ಹಾಯ್ 
ಸ್ವಿಚ್ ಆನ್ ಮಾಡಿದೆ ಗಣಕಯಂತ್ರವ
ಶುರುಹಚ್ಚಿದ ಮ್ಯಾನೆಜೆರ್  ಬೈಯ್ಯುವ ಮಂತ್ರವ


ನಿಮಿಷ ನಿಮಿಷಕ್ಕೂ ಸಮಯವ ನೋಡಿ 
ಹತ್ತೂವರೆ ತನಕ ಕಾಯಕವೆ ಬೇಡಿ 
ಕೈ ನೋಯಲು ರೆಫ್ರೆಶ್ ಮಾಡಿ ಮಾಡಿ
ಟೈಮ್ ಪಾಸ್ ಮಾಡಿದೆ ಫೇಸ್ಬುಕ್ ನೋಡಿ


-
ಕೆ. ಸಿ.


       ಕನಸು ಹೆಚ್ಚು..... ಏಕೆ??

ಸತ್ಯ! ಜ್ಞಾಪಕದಿಂದ ನಾಲಿಗೆಗೆ ಹರಿಯಲು
ಸುಳ್ಳು! ಕಲ್ಪನೆಯಿಂದ ನಾಲಿಗೆಗೆ ಹರಿಯಲು
ಸುಳ್ಳು ಸತ್ಯಕಿಂತ ಸುಲಭವಾಗಿ ಹರಿಯಲು
ಕಲ್ಪನೆ  ಜ್ಞಾಪಕಕಿಂತ ಶಕ್ತಿಯುತ ಯೆಂದು ನಿರೂಪಿಸಲು

ಇದ ಕಾರಣವೇ ಹಗಲುಕನಸಿಗೆ ?
ಇದ ಪಾಯವೇ ಕನಸಿನ ಕೋಟೆಗೆ ?

--
ಕೆ. ಸಿ.



      ಹೆಣ್ಣಿಗೆ!  ಏನ್  ಈ ಅನುಭಂದ

ಹೆಣ್ಣಿಗು ಕನ್ನಡಿಗು ಏನ್ ಈ ಅನುಭಂದ  
ತಾಳಿ ಕಟ್ಟ ಗಂಡನೊಡನೆ ಇಲ್ಲ ಆ ಸಂಬಂಧ 
ಬಿಂಬ ನೋಡಿ ಪಡುವಳು ಆನಂದ
ಈ ಮಯೇಯೆನು ಶ್ರುಷ್ಟಿಸಲಾಗದು ಶಿವನಿಂದ!

ಹೆಣ್ಣಿಗು ಹೊನ್ನಿಗು ಏನ್ ಈ ಅನುಭಂದ
ಕಣ್ಣ ಅರಳಲು ಕನಕದ ಕಾಂತಿಯಿಂದ 
ಬಯಸಿದರೆ ಬಂಗಾರವ ಮನದಿಂದ
ಖಾಲಿಯಾಗದ ಕಾಸು ಪತಿಯ ಜೇಬಿಂದ?

--
ಕೆ. ಸಿ

ನಿಲ್ಲೋದು ನಿಲ್ಸೋದು


ನಾಲಗೆ ಮೇಲೆ ಪದ ನಿಲ್ಲಲ್ಲ
ಕೈಯಾಗ್  ಹಣ ನಿಲ್ಲಲ್ಲ
ಮನಸಾಗ್ ಹುಡುಗಿ ನಿಲ್ಲಲ್ಲ
ದರಿದ್ರ ಜೀವನ ಮುಗಿದಾಗ  !!!
ಮಾಡಿರೋ ಹೆಸರು ನಿಲ್ಲಲ್ಲ
ಆದರೂ ನಿಲ್ಸೋ ಪ್ರಯತ್ನ ನಿಲ್ಸಲ್ಲ


--ಕೆ. ಸಿ.

ನಾಲಿಗೆಯಿಂದ ಸ್ನೇಹದವರೆಗೂ


ನಾಲಿಗೆ ರುಚಿಸುವುದು ತಿಂಡಿಯಿಂದಲ್ಲ 
ಆಡುವ ಒಳ್ಳೆ ಮಾತಿನಿಂದ ||
ಕಿವಿಗೆ ಇಂಪ್ಪೆನಿಸುವುದು ಮಾತಿನಿಂದಲ್ಲ
ಅದರಲ್ಲಿರುವ ಭಾವನೆಯಿಂದ ||
ಮನಸ್ಸು ಹಗುರವಾಗುದು ಭಾವನೆಯಿಂದಲ್ಲ
ಅದಕ್ಕೆ ಕಾರಣವಾದ ಸ್ನೇಹದಿಂದ ||


--ಕೆ. ಸಿ.

ತಂಪಾಗಲಿಕ್ಕೆ

ಕಣ್ಣ ತಂಪಾಗಲಿಕ್ಕೆ ಹುಡಗೀನ್ ನೋಡ್ಬೇಕು
ಮನಸ್ ತಂಪಾಗಲಿಕ್ಕೆ ಯಂಡ ಹೊಡಿಬೇಕು
ಜೀವನ ತಂಪಾಗಲಿಕ್ಕೆ ಸಾಫ್ಟ್ವೇರ್ ಕಂಪನಿಯ ಕೆಲಸ ಬಿಡಬೇಕು

--ಕೆ. ಸಿ

Encounter with the Third Kind

I never thought I would be writing a blog after such a long time, but something happened today that I wanted to tell it to the world.
For long time I have noticed Transgenders standing near the traffic signal, clapping their hands and asking for money and recently in past few years it has increased a lot in Bangalore. When we don’t give them the money, they misbehave with you, touch your private parts. I have always been irritated with this.
Today while traveling from office to home got caught in Rain, had to stop my vehicle and run towards shade. I happened to find shelter near a tea shop. I was standing there for a while. Lot of people where standing around me. My pant had drenched in rain and I was feeling cold because of it. I thought I should get some tea to warm myself up and turned around to order and saw a transgender right behind me, I suddenly became very uncomfortable and conscious. I stood there, lost in thoughts of all things that might happen if I don’t give the money.
I saw few people coming to shop, buy some tea and coffee. They referred the owner of the shop as aunty. I thought that some elderly woman runs the shop. When the rain almost stopped and people started moving. Thinking that the transgender would have left, I turned around to order some tea. I stood there in surprise and also was ashamed of myself, after what I saw. Transgender was the owner of the shop and I had just three words “akka ondu tea” (sister one tea). Tea was very good, but my attitude was bad. Later I brought some bonda, filled my stomach and paid her the money and left.
All the way home I was thinking about this, how wrong I was. But I had to really appreciate her, when people like her are begging for living, here she was selling tea coffee for living. Hats off to her.
And I have decided to have tea everyday in her shop…