ದೇಶ ಗಣೇಶ ಗಾಂಧಿ
ವರ್ಷವರ್ಷಕ್ಕೂ ಚಿಕ್ಕದಾಯಿತು ವಿನಾಯಕನ ವಿಗ್ರಹ
ಮಣ್ಣಲ್ಲಿ ಮಾಡಿದರೂ ಸ್ವರ್ಣದ ಬೆಲೆ ಅವನ ಅನುಗ್ರಹ
ವರ್ಷವರ್ಷಕ್ಕೂ ಕಮ್ಮಿಯಾಯಿತು ತರುವ ಪೂಜಾ ಸಾಮಗ್ರಿ
ಇನ್ಫ್ಲೇಶನ್ ಹೆಸರಲಿ ಏನು ಮಾಡುತ್ತಿರುವಳು ಸೋನಿಯಾ ಗಾಂಧಿ
ಚಿಕ್ಕಚಿಕ್ಕದಾಗುತ್ತ ಮುಂದೆ ಮಾಯವಾಗುವ ಗಣೇಶ(ನಂಬಿಕೆ)
ಯಾವ ಕಡೆಗೆ ಹೋಗುತ್ತಿದೆ ಈ ನಮ್ಮ ದೇಶ
ಉಪವಾಸ ಮಾಡಿ ಸ್ವತಂತ್ರ ಕೊಟ್ಟ ಆ ಗಾಂಧಿ
ಜನರ ರಕ್ತ ಹೀರುತ್ತಿರುವಳು ಈ ಗಾಂಧಿ
ದೇವರ ಪೂಜಿಸಲು ಹಿಂದೆ ಮುಂದೆ ನೋಡುವ ಸ್ಥಿತಿ
ಇದು ಎಂಥ ದುರ್ಗತಿ ಗಣಪತಿ
ಸಿದ್ದಿಸಿ ಬೇಡುವೆ ಸಿದ್ದಿ ವಿನಾಯಕ
ಕೊಡು ನಮ್ಮ ದೇಶಕ್ಕೆ ಒಳ್ಳೆ ನಾಯಕ
-
ಕೆ. ಸಿ.