ಹೆಣ್ಮಕ್ಕಳ  ಡೈಲಾಗ್ ಅಲ್ಲಿ ವೆಯಿಟ್ ಇಲ್ಲ 
ಅಧ್ರು ಗಂಡ್ಮಕ್ಕಳ  ಬಿಳ್ತಾರೆ ..... ಡೌಟ್ ಇಲ್ಲ 
-
ಕೆ. ಸಿ.




ಆಚಾರ

ಆಚಾರದ ಬಗ್ಗೆ ವಿಚಾರ ಮಾಡುವಂತಿಲ್ಲ
ಕಣ್ಮುಚ್ಚಿ ಆಚರಿಸುವಂತ ಬುದ್ಧಿ ದೇವರು ಕೊಟ್ಟಿಲ್ಲ
ಎಷ್ಟು ವಿಚಾರಿಸಿದರೂ ಆಚಾರ ಬದಲಾಗುವುದಿಲ್ಲ
ಆಚಾರವ ಬದಲಾಯಿಸುವ ವಿಚಾರ ಮಾಡುವಂತಿಲ್ಲ

ವಿಚಾರವಿಲ್ಲದೆ ಏನು ಮಾಡಿದರೂ ಬೈಯುತ್ತರೆಲ್ಲ
ಆಚಾರದ ಬಗ್ಗೆ ವಿಚಾರ ಮಾಡಿದರೆ ತಡೆಯುತ್ತಾರೆಲ್ಲ
ಸರಿ-ತಪ್ಪುಗಳ ತಿಳಿಯ ಬೇಕೆಂದು ಹೇಳುತ್ತಾರೆಲ್ಲ 
ಆಚಾರವು ಎಷ್ಟು ಸರಿ ಎಂದು ತಿಳಿಯಲು ಹೋದರೆ,  ವಿರೋಧಿಸುತ್ತಾರೆಲ್ಲ 

ದೇವರು ಕೊಟ್ಟ ವಿವೇಕದಿಂದ ವಿಚಾರಿಸುವಂತಿಲ್ಲ
ವಿಚಾರಕೆ ಉಪಯೋಗಬಾರದ ವಿವೇಕವೂ ಪ್ರಯೋಜನವಿಲ್ಲ
ವಿವೇಕವ ಬಿಟ್ಟು ಆಚರಿಸಿದರೆ ಮನಸಿಗೆ ಒಪ್ಪಿಗೆ ಇಲ್ಲ
ಮನಸಿಲ್ಲದೇ ಆಚರಿಸಿದರೆ ಆಚಾರಕೆ ಬೆಲೆಯೇ ಇಲ್ಲ

--
ಕೆ. ಸಿ.