ಒಂದು ಗಂಟೆಗೆ ಕ್ಯಾಬ್ ಚಾಲಕನ ಫೋನ್ ಕಾಲು
"ಊಟ ಬೇಗ ಮಾಡು" ಅಂತ ಅಮ್ಮ ಹೇಳಲು
ಕರಿಯುತ್ತಿರಲು ಮಿಸ್ಡ್ ಕಾಲ್ ಮೇಲ ಮಿಸ್ಡ್ ಕಾಲು
ಅಮ್ಮ ಕೊಟ್ಟಳು ಕುಡಿಯಲು ಹಾಲು
ಕೂತೆನು ಕ್ಯಾಬಲ್ಲಿ ಸಾರೀ ಹೇಳುತ
ಒಳೆಗೆ ಬೈಕೊಂಡು ಮೇಲ ಕಿಸಿಯುತ
ಹಿಂತುರುಗಿ ನೋಡಿದೆ, "ಹಾಯ್" ಹೇಳಲು ಗೆಳಯ
ಅವನಿಗೆ ಫೋನಿನಲ್ಲಿ ಗರ್ಲ್ ಫ್ರೆಂಡಿನ ಪ್ರಳಯ
ಅಷ್ಟರಲ್ಲಿಯೇ ಹೊಡ್ಕೊಂತು ನನ್ನ ಫೋನು
ನೋಡಿ ಅದನ್ನು ಭಯಭೀತನಾದೆನು ನಾನು
"ಹಲೋ" ಹೇಳಿದಂತೆಯೇ, ಶುರುವಾಯಿತು ಸುಂಟರಗಾಳಿ
ಮಾತಿನಲ್ಲಿಯೇ ಗರ್ಲ್ ಫ್ರೆಂಡಿನ ದಾಳಿ
ಕ್ಯಾಬ್ ಚಾಲಕ ಬ್ರೇಕ್ ಹೊಡೆದರು
ಆಚೆ ನೋಡಿದರೆ, ಕಂಪನಿಯ ಎದುರು!
ಅಷ್ಟು ಬೇಗನೆ ಬಂದು ಬಿಟ್ಟೇನ
ಇಲ್ಲ ಪ್ರೇಯಸಿ ಕಾಲ ನುಂಗಿಬಿಟ್ಟಳ?
ಹೇಳಿದೆ ನಾನು ಪ್ರೇಯಸಿಗೆ ಬೈ
ಒಳೆಗೆ ಹೊರೆಟೇನು ಹೇಳುತ್ತ ಹಾಯ್
ಸ್ವಿಚ್ ಆನ್ ಮಾಡಿದೆ ಗಣಕಯಂತ್ರವ
ಶುರುಹಚ್ಚಿದ ಮ್ಯಾನೆಜೆರ್ ಬೈಯ್ಯುವ ಮಂತ್ರವ
ನಿಮಿಷ ನಿಮಿಷಕ್ಕೂ ಸಮಯವ ನೋಡಿ
ಹತ್ತೂವರೆ ತನಕ ಕಾಯಕವೆ ಬೇಡಿ
ಕೈ ನೋಯಲು ರೆಫ್ರೆಶ್ ಮಾಡಿ ಮಾಡಿ
ಟೈಮ್ ಪಾಸ್ ಮಾಡಿದೆ ಫೇಸ್ಬುಕ್ ನೋಡಿ
-
ಕೆ. ಸಿ.