ಕಾಲೇಜ್ನಲ್ಲಿ ಶೇವ್ ಮಾಡ್ತಾ ಇದ್ದೆ ....ಗಡ್ಡ ಮೀಸೆ ಬರಲಿ ಅಂತ
ಈಗೂ ಶೇವ್ ಮಾಡ್ತಿದಿನಿ ....ಯಾರು ಅಂಕಲ್ ಅಂತ ಕರಿದೆ ಇರ್ಲಿ ಅಂತ
ಸಮಯ ಬದಲಾಯ್ತು ....ಕಾರಣ ಬದಲಾಯ್ತು
ಮಾಡೋ ಕೆಲಸ ಬದಲಾಗಲಿಲ್ಲ ..... ಹಣೆ ಬರಹ
-
ಕೆ. ಸಿ
ಹಸು ದೇವರು! ತಿನ್ನಬಾರದು ...
ಅನ್ನ ದೇವರು! ತಿನ್ನಬಹುದು ....
ತೊಗೊಳಪ್ಪ
-
ಕೆ. ಸಿ
ಅಗಲಿ
ಕಣ್ಮುಚ್ಚಿ ತೆರೆಯುವುದರಲ್ಲಿ ಕಣ್ಮುಚ್ಚಿಸಿದವರ್ಯಾರು
ಜೀವಾತ್ಮವನ್ನು ಪರಮಾತ್ಮ ಕಡೆಗೆ ಸೆಳದವರ್ಯಾರು
ಜೀವ ಜೀವ ಮಧ್ಯ ಸಂಭಂದವ ಮುರಿದವರ್ಯಾರು
ಕಣ್ಣಲ್ಲಿ ಗಂಗೆಯ ಇಟ್ಟವರ್ಯಾರು
ಆ ಗಂಗೆಯ ಉಕ್ಕಿಸಿದ ಶಿವನ್ಯಾರು
ದೇವರಾ? ದೇವರಾ? ಆ ದೇವರ್ಯಾರು
-
ಕೆ. ಸಿ